ಆಶಾಢ ನಿಬ್ಬಣ ಸೂಶ್ಯಾಡಿ ಬಂತು

ಆಶಾಢ ನಿಬ್ಬಣ ಸೂಶ್ಯಾಡಿ ಬಂತು
ಮಾಯಾ ಮೋಹದ ಕೂಸು ಹುಟ್ಟೀತು ಗೆಳತಿ || ಪ ||

ಲೇಸವಾದ ತಾಯಿಯಾಸೆ ಬಿಟ್ಟು
ಈಶಗುರು ಗಂಡಗ ವಾಸವಾಗಮ್ಮಾ ||ಅ.ಪ.||

ಮುತ್ತೈದಿ ಮಂದಿ ಕೂಡಿ
ಗೊತ್ತಿಟ್ಟು ಮುದ್ದಾಡಿ
ನಿತ್ಯ ನಿರಂಜನ ತೋರಮ್ಮಾ
ತಾರಕ ಮನೆಯೊಳು ಮೀರಿದ ದಾರಿಯೊಳು
ಆರಿಗೆ ಸಿಗದ ಮೀರಿದ ವುನ್ಮನೀ ಸೇರಿದೆಮ್ಮಾ ||೧||

ಸತ್ಯದಿ ಶಿಶುವಿನಾಳ
ಉತ್ತಮ ಗೋವಿಂದನ
ನಿತ್ಯ ನಿರಂಜನ ತೋರೆಮ್ಮಾ
ಹಾದಿಯೆಲ್ಲ ಹಿಡಿದು ಮೇದಿನಿಯೊಳು ಬಂದು
ಮೋಹದ ಮುದವಿ ಮಾಡಿಕೊಂಡೆಮ್ಮಾ ||೨||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಳಿ ಬಂತೇ ರಮಣಿ
Next post ಹಾರ್ಸ್ ಪವರ್

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…